ಜೈನ ಧರ್ಮದ ಪೂರ್ವಾಚಾರ್ಯರ
ಪರಿಚಯ
ಆಚಾರ್ಯ ಕನಕಸೇನರು
ತಮಿಳುನಾಡಿನ ಸೇಲಮ್ ಜಿಲ್ಲೆ ಯಲ್ಲಿರುವ ಧರ್ಮಪುರಿ ಗ್ರಾಮದಲ್ಲಿ ದೊರೆತ ಶಿಲಾಶಾಸನ ದಿಂದ ಇವರ ಪರಿಚಯ ದೊರೆಯುವದು, ಇವರು ಸೇನಗಣದ ಆಚಾರ್ಯ ವಿನಯಸೇನ’ರ ಶಿಷ್ಯ ರಾಗಿದ್ದರು. ಆಚಾರ್ಯ ಕನಕಸೇನರ ಉಪದೇಶದಿಂದ ಪ್ರಭಾವಿತರಾದ ನಿಧಿ ಯಣ್ಣ ಮತ್ತು ಚಂಡಿಯಣ್ಣ ಹೆಸರಿನ ಶ್ರೀಮಂತ ಶ್ರಾವಕರು ಜಿನಮಂದಿರವೊಂದನ್ನು ಕಟ್ಟಿಸಿ ದ್ದರು. ಮಂದಿರದ ವ್ಯವಸ್ಥೆಗೆ ಆ ಪ್ರದೇಶದ ನೊಳಂಬ ವಂಶ ದ ಅರಸ ಮಹೇಂದ್ರ ನೆಂಬವನು ಕ್ರಿ.ಶ. ೮೯೩ ರಲ್ಲಿ ಮೂಲಪಲ್ಲಿ ಹೆಸರಿನ ಗ್ರಾಮವೊಂದನ್ನು ಆಚಾರ್ಯರಿಗೆ ಸಮರ್ಪಿಸಿದ್ದನು. ಕೆಲವು ವರ್ಷಗಳ ತರುವಾಯ ಅರಸ ಮಹೇಂದ್ರನ ಮಗ ಅಯ್ಯಪದೇವ ನೆಂಬವನು ಇದೇ ಮಂದಿರಕ್ಕೆ ಒಂದು ಗ್ರಾಮವನ್ನು ದಾನವಾಗಿಕೊಟ್ಟ ವಿವರ ದೊರೆಯುವದು. ಅದು ಯಾವ ಗ್ರಾಮವೆಂಬುದರ ಉಲ್ಲೇಖವಿಲ್ಲ. ಇದರಿಂದ ಆಚಾರ್ಯ ಕನಕಸೇನರು ಜೈನ ಜೈನೇತರರಾದಿಯಾಗಿ ಸಮಸ್ತ ಜನರ ಆರಾಧ್ಯರಾಗಿದ್ದರೆಂಬುದು ಪ್ರತೀತವಾಗುವದು.
(ಜೈನಿಜಮ್ ಇನ್‌ಸೌತ ಇಂಡಿಯಾ ಪುಟ ೧೬೨)
ಶಾಸ್ತ್ರ ಆಧಾರ
ಪ್ರೊ. ಬಿ.ಪಿ.ನ್ಯಾಮಗೌಡ
ವೀರಾನ್ವಯ
SARVARTHASIDDHI
GRANTHAMALE
PRASHANT J UPADHYE
GALATAGA