ಜೈನ ಧರ್ಮದ
ಪೂರ್ವಾಚಾರ್ಯರ ಪರಿಚಯ
ಆಚಾರ್ಯ ನಾಗನಂದಿ
ಕರ್ನಾಟಕದ ರಾಜ್ಯದ ಧಾರವಾಡ ಜಿಲ್ಲೆಗೆ ಸೇರಿದ ‘ರಾಣೇಬೆನ್ನೂರ’ ನಗರದಲ್ಲಿ ದೊರೆತ ಶಿಲಾಲೇಖ ದಿಂದ ಇವರ ಕಿರು ಪರಿಚಯ ದೊರೆಯುವದು. ಇವರು ಸಿಂಹವೂರಿ ಗಣ’ ದ ಆಚಾರ್ಯರಾಗಿದ್ದರು. ರಾಷ್ಟ್ರಕೂಟರ ಸಮ್ರಾಟ ‘ಅಮೋಘ ವರ್ಷ’ ನು ನಾಗುಲ ಬಸದಿ ಹೆಸರಿನ ಜಿನಮಂದಿರಕ್ಕಾಗಿ ಕ್ರಿ.ಶ. ೮೬೦ ರಲ್ಲಿ ಇವರಿಗೆ ಕೆಲ ಪ್ರಮಾಣದ ಭೂಮಿಯನ್ನು ದಾನವಾಗಿ ಕೊಟ್ಟ ವಿವರವಿದೆ. *ಮಹಾರಾಷ್ಟ್ರ ರಾಜ್ಯದ ಔರಂಗಾಬಾದ ಜಿಲ್ಲೆ ಯಲ್ಲಿರುವ ಎಲ್ಲೋರಾ ದ ಪ್ರಸಿದ್ಧ ಜಿನಮಂದಿರಗಳಲ್ಲಿ ಜಗನ್ನಾಥ ಸಭಾ ಹೆಸರಿನ ಒಂದು ಜೈನ ಗುಹೆ ಯಿದೆ. ಇದರಲ್ಲಿರುವ ಒಂದು ಶಾಸನದಲ್ಲಿ ಆಚಾರ್ಯ ನಾಗನಂದಿಗಳ ಉಲ್ಲೇಖವಿದೆ. ಇವರೊಂದಿಗೆ ಆಚಾರ್ಯ ದೀಪನಂದಿ ಹಾಗೂ ಕೆಲವು ಶ್ರಾವಕರ ಹೆಸರು ಗಳೂ ಇದರಲ್ಲಿ ದೊರೆಯುವುದುಂಟು. ಬಹುಶಃ ಆಚಾರ್ಯ ನಾಗನಂದಿಗಳಿಂದ ಪ್ರಭಾವಿತರಾಗಿ ಪ್ರಸ್ತುತ ಗುಹೆಯಲ್ಲಿ ಜಿನಬಿಂಬಗಳನ್ನು ಕೊರೆದು ಪ್ರತಿಷ್ಠಾಪಿಸಲಾಗಿದೆ.
ತಮಿಳುನಾಡಿನ ಅರ್ಕಾಟ ಜಿಲ್ಲೆ ಯಲ್ಲಿರುವ ಪಂಚಪಾಂಡವ ಮಲೈ ಪರ್ವತ ದ ಮೇಲೆ ಒಂದು ಶಿಲಾಶಾಸನ ವಿದೆ. ಅದರಲ್ಲಿಯೂ ಆಚಾರ್ಯ ನಾಗನಂದಿಗಳ ಹೆಸರು ದೊರೆ ಯುವುದುಂಟು. ಇಲ್ಲಿ ಇವರ ಶಿಷ್ಯ ‘ನಾರಣ’ನೆಂಬ ಹೆಸರಿನ ಶ್ರಾವಕ ನಿಂದ ಪೊನ್ನಿಯಕ್ಕಿಯಾರ್’ (ಸುವರ್ಣಯ) ಯಕ್ಷಿಣಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರಸ್ತುತ ವಿವರ ಕೊಡಮಾಡಲಾದ ಶಾಸನ ಇದಾಗಿದ್ದು, ಆಚಾರ್ಯರ ಪ್ರೇರಣೆಯ ವಿವೇಚನೆ ಮಾಡಲಾಗಿದೆ ಎಂಬ ಉಲ್ಲೇಖ ಇದರಲ್ಲಿದೆ.
[ಜೈನ ಶಿಲಾಲೇಖ ಸಂಗ್ರಹ ಭಾ-೨ , ಲೇಖ – ೧೧೫ , ಭಾ-೪ – ಲೇಖ ೫೬ , ಭಾಗ – ೫ ಲೇಖ ೧೨]
ವರ್ಧಮಾನ ಚರಿತ ಮತ್ತು ಶಾಂತಿನಾಥ ಪುರಾಣ’ ಹೆಸರಿನ ಸಂಸ್ಕೃತ ಮಹಾಪುರಾಣ ಗಳನ್ನು ರಚಿಸಿದ ಅಸಗ ನು ಆಚಾರ್ಯ ನಾಗನಂದಿಗಳ ಶಿಷ್ಯ ನಾಗಿದ್ದನು. ವರ್ಧಮಾನ ಚರಿತ ಕ್ರಿ.ಶ. ೮೫೩ ರಲ್ಲಿ ಪೂರ್ಣಗೊಂಡಿದೆ. ಕವಿ ಇದರಲ್ಲಿ ಆಚಾರ್ಯ ಭಾವಕೀರ್ತಿ ಹಾಗೂ ಆಚಾರ್ಯ ಆರ್ಯನಂದಿಗಳನ್ನು ಕೂಡ ಗುರುರೂಪದಲ್ಲಿ ಉಲ್ಲೇಖಿಸಿದ್ದಾನೆ.
ಈ ಮಹಾಕಾವ್ಯದ ರಚನಾಸ್ಥಳ ‘ಮೌದ್ಗಲ್ಯ ಪರ್ವತ ವೆಂದು ಹೇಳಲಾಗಿದೆ. ತದನಂತರ ಚೋಡ (ಚೋಳ) ದೇಶ ದ ವರಲಾ ನಗರದಲ್ಲಿ ಅಸಗ ನು ಎಂಟು ಗ್ರಂಥಗಳನ್ನು ರಚನೆ ಮಾಡಿದುದಾಗಿ ಪ್ರಶಸ್ತಿ ಪ್ರಕರಣದಲ್ಲಿ ಉಲ್ಲೇಖಿ ಸಲಾಗಿದೆ. ಆದರೆ ಇಲ್ಲಿ ಉಲೇಖಿತ ಸ್ಥಳಗಳ ಗುರುತು ಇದುವರೆಗೆ ಆಗಿಲ್ಲ. ಆಚಾರ್ಯ ನಾಗನಂದಿಗಳಿಗೆ ಸಂಬಂಧಿಸಿದ ವಿವರಣೆಗಳನ್ನು ಗಮನಿಸಿದರೆ, ಆಚಾರ್ಯರು ತಮ್ಮ ಸಮಯದ ಪ್ರಭಾವಿ ಮುನಿಗಳಾಗಿದ್ದರು. ದಕ್ಷಿಣ ಭಾರತದ ಹೆಚ್ಚು ಪ್ರದೇಶಗಳಲ್ಲಿ ವಿಹಾರ ಕೈಕೊಂಡು ಧರ್ಮ ಪ್ರಭಾವನೆ ಮಾಡಿದ್ದಾರೆ.
ಶಾಸ್ತ್ರ ಆಧಾರ
ಪ್ರೊ. ಬಿ.ಪಿ.ನ್ಯಾಮಗೌಡ
🌷 ವೀರಾನ್ವಯ 🌷
SARVARTHASIDDHI
GRANTHAMALE
PRASHANT. J . UPADHYE
GALATAGA