Friday, October 24, 2025
spot_img

ಐಹೊಳೆ ಪುರಾತನ ಗುಹಾಲಯ – ಜಿನಾಲಯ ಪರಿಚಯ

ಪುರಾತನ ಗುಹಾಲಯ – ಜಿನಾಲಯ ಪರಿಚಯ
PRACHIN GUFA JINALAYA PARICHAY
KARNATAKA – ಐಹೊಳೆ (AIHOLE)

ಹುನಗುಂದ ತಾಲೂಕಿನ ಐಹೊಳೆ ಎಂಬ ಹೆಸರಿನ ಗ್ರಾಮದ ಸಮೀಪದಲ್ಲಿ ಪೂರ್ವ ಮತ್ತು ಉತ್ತರ ಮಗ್ಗಲು ಗುಹೆಗಳಿವೆ. ಪ್ರಮುಖ ಗುಹೆಯ ರಚನೆಯು ಬಾದಾಮಿಯ ಗುಹೆಯ ಮಾದರಿಯಲ್ಲಿಯೇ ಇದೆ. ಈ ಗುಹೆಯು ಪಡಸಾಲೆ, ಮಂಟಪ ಮತ್ತು ಗರ್ಭಗ್ರಹಗಳಲ್ಲಿ ವಿಭಕ್ತವಾಗಿದೆ.

  • ಪಡಸಾಲೆಯಲ್ಲಿ ನಾಲ್ಕು ಕಂಬಗಳಿವೆ.
  • ಛಾವಣಿಯ ಮೇಲೆ ಮೀನು ಹಾಗೂ ಪುಷ್ಪಗಳ ಆಕೃತಿಗಳಿವೆ.
  • ಎರಡನೇ ಗೋಡೆಯ ಮೇಲೆ 1008 ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬವಿದೆ.
  • ಬಲಗಡೆಯಲ್ಲಿ ಚೈತ್ಯ-ವೃಕ್ಷದ ಕೆಳಗಿರುವ ಜಿನಮೂರ್ತಿಯನ್ನು ರೂಪಿಸಲಾಗಿದೆ.
  • ಅದರ ಒಂದು ಮಗ್ಗಲಿಗೆ ನಾಗ ಮತ್ತು ಇನ್ನೊಂದು ಮಗ್ಗಲಿಗೆ ನಾಗಿಣಿಯರಿದ್ದಾರೆ.

ಈ ಗುಹೆಯಲ್ಲಿರುವ ಸಹಸ್ರಫಣಾಯುಕ್ತ 1008 ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪ್ರತಿಮೆಯು ಕಲಾತ್ಮಕ ದೃಷ್ಟಿಯಿಂದ ಬಹು ಮಹತ್ವಪೂರ್ಣವಾಗಿದೆ. ಅನ್ಯ ಜೈನ ಆಕೃತಿಗಳೂ ಹಾಗೂ ಚಿಹ್ನೆಗಳೂ ಇಲ್ಲಿ ಪ್ರಚಲಿತವಾಗಿವೆ. ಸಿಂಹ, ಮಕರ ಮತ್ತು ದ್ವಾರಪಾಲಕ ಆಕೃತಿಗಳು ಶಿಲ್ಪಕಲೆಯ ವೈಭವವನ್ನು ತೋರ್ಪಡಿಸುತ್ತವೆ. ಅಲ್ಲದೆ, ಆಕೃತಿಗಳ ವಿನ್ಯಾಸ ಎಲಿಫೆಂಟಾದಲ್ಲಿಯ ಶೈಲಿಯನ್ನು ನೆನಪಿಗೆ ತರುತ್ತದೆ.

ಮೇಘುಟೀ (ಮೇಗುತಿ) ಜಿನಾಲಯ

ಈ ಗುಹೆಗಳ ಪೂರ್ವದಲ್ಲಿ ಮೇಘುಟಿ (ಮೇಗುತಿ / ಮೇಘುಟೀ) ಎಂಬ ಹೆಸರಿನ ಜೈನ ಮಂದಿರವು ಗುಡ್ಡದ ಮೇಲೆ ನಿರ್ಮಿತವಾಗಿದೆ.

  • ಇದರಲ್ಲಿ ಚಾಲುಕ್ಯ ರಾಜನಾದ ಪುಲಕೇಶಿಯ ಹಾಗೂ ಶಕ ಸಂ. 556 [ಕ್ರಿ.ಶ. 634] ರ ಉಲ್ಲೇಖವಿದೆ.
  • ಈ ಶಿಲಾಲೇಖವು ತನ್ನ ಸಂಸ್ಕೃತ ಕಾವ್ಯಶೈಲಿಯ ವಿಕಾಸದಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿದೆ.
  • ಈ ಶಿಲಾಲೇಖದ ಲೇಖಕ ರವಿಕೀರ್ತಿ, ತಾನು ಕಾವ್ಯಕ್ಷೇತ್ರದಲ್ಲಿ ಕಾಳಿದಾಸ ಮತ್ತು ಭಾರವಿಯಂತೆ ಕೀರ್ತಿಯನ್ನು ಪಡೆವನೆಂದು ಹೇಳಿಕೊಂಡಿದ್ದಾನೆ.

ನಿಜವಾಗಿಯೂ, ಕಾಳಿದಾಸ ಮತ್ತು ಭಾರವಿಯರ ಕಾಲನಿರ್ಣಯದಲ್ಲಿ ಈ ಶಿಲಾಲೇಖವು ಬಹಳ ಸಹಾಯಕವಾಗಿದೆ. ಯಾಕೆಂದರೆ ಇದರಿಂದಲೇ ಅವರ ಕಾಲದ ಅಂತಿಮ ಸೀಮೆಯನ್ನು ಪ್ರಾಮಾಣಿಕವಾಗಿ ನಿಶ್ಚಿತಪಡಿಸಬಹುದು. ಐಹೊಳೆ ಎಂಬ ಹೆಸರು ಬಹುತರ ಆರ್ಯಪುರ ಎಂಬುದರ ಅಪಭ್ರಂಶ ರೂಪವಾಗಿದೆ.

ಶಾಸ್ತ್ರಾಧಾರ:

  • ಡಾ: ಹೀರಾಲಾಲ ಜೈನ್
  • ಶ್ರೀ ಮಿರ್ಜಿ ಅಣ್ಣಾರಾಯರ ಭಾರತೀಯ ಸಂಸ್ಕೃತಿಗೆ ಜೈನ ಧರ್ಮದ ಕೊಡುಗೆ
  • ಸರ್ವಾರ್ಥಸಿದ್ಧಿ ಗ್ರಂಥಮಾಲೆ – ಪ್ರಶಾಂತಜೀ ಉಪಾಧ್ಯೆ (ಗಳತಗಾ)

WhatsApp Channel Join Now
youtube Group Subscribe
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

- Advertisment -spot_img

Most Popular

Recent Comments