ಕಾಲದ ಹೊಡೆತಕ್ಕೆ ಕಣ್ಮರೆಯಾದ ಕರ್ನಾಟಕದ ಜಿನಾಲಯಗಳ ಪರಿಚಯ
ಬಂಕಾಪುರದ ಧೋರ ಬಸದಿ
ಮಳಖೇಡದ ರಾಷ್ಟ್ರಕೂಟರ ನಿತ್ಯವರ್ಷ ನಾಲ್ಕನೆಯ ಗೋವಿಂದನ ಆಳ್ವಿಕೆಯಲ್ಲಿ, ಗದಗ ತಾಲ್ಲೂಕಿನ ಅಸುಂಡಿಯ ಕ್ರಿ.ಶ. ೯೨೫ರ ಶಾಸನದಲ್ಲಿ ನಿತ್ಯವರ್ಷ ಶ್ರೀಪೃಥುವಿವಲ್ಲಭ ಮಹಾರಾಜರಾಧಿರಾಜ ಪರಮೇಶ್ವರ ಪರಮಭಟ್ಟಾರಕ ಶ್ರೀ ವಿಜಯರಾಜ್ಯ ಮುತ್ತರೋತ್ತರಾಭಿವೃದ್ಧಿಗೋಸ್ಕರ ನಿರ್ವಹಿಸಲಾಗಿತ್ತು.
ಸಕಲ ನೃಪಕಾಲಾತೀತ ಸಂವತ್ಸರ ಶತಂಗಳೆಂಟು ನೂರನಾಲ್ವತ್ತೇಳನೆಯ ಪ್ರಾರ್ಥಿವ ಸಂವತ್ಸರದಲ್ಲಿ, ಬಂಕಾಪುರದ ಧೋರ ಜಿನಾಲಯಕ್ಕೆ ಸಂಬಂಧಿಸಿದಂತೆ ಚಂದ್ರಪ್ರಭಭಟಾರಪರಸುಂಡಿಯ ನಂಭ್ಯಂತರ ಸಿದ್ಧಿಯಾಳುತ್ತಿರೆ ಎಂಬ ಶಾಸನೀಯ ಉಲ್ಲೇಖವಿದೆ. ನಾಗಪುಲಿ ಗಾವುಂಡ ಮತ್ತು ಗಾವುಂಡುಗೆಯ ರಪ್ಪೂರ ನಾಗಯ್ಯ ಅವರು ತಮ್ಮ ನಿರ್ಮಿಸಿದ ದೇಗುಲಕ್ಕೆಂದು ನಾಗಪುಲಿ ಗಾವುಂಡನ ಕಯ್ಯೋರವನ್ನು ಮಾರುಗೊಟ್ಟಿದ್ದಾರೆ.
ಈ ಶಾಸನದ ಉಲ್ಲೇಖದಿಂದ ಬಂಕಾಪುರದಲ್ಲಿ ‘ಧೋರ’ ಎಂಬ ಹೆಸರಿನ ಬಸದಿ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಕರ್ನಾಟಕದಲ್ಲಿ ನಿರ್ಮಾಪಕರ ಹೆಸರಿನಿಂದಲೇ ಪ್ರಸಿದ್ಧವಾದ ಅನೇಕ ಬಸದಿಗಳು ಪ್ರಾಚೀನ ಕಾಲದಿಂದಲೂ ಕಂಡು ಬರುತ್ತವೆ. ಈ ಹಿನ್ನೆಲೆ ಪ್ರಸ್ತುತ ಬಸದಿ ಮಳಖೇಡದ ರಾಷ್ಟ್ರಕೂಟರ ಮಹಾಸಾಮಂತನಾದ ಚಲ್ಲಕೇತನರ ಧೋರನ ಆಳ್ವಿಕೆಯಲ್ಲಿ ನಿರ್ಮಾಣವಾಗಿರಬಹುದು.
ಈ ಮನೆತನದಲ್ಲಿ:
- ೧ನೆಯ ಧೋರ (ಬಂಕೇಯನ ತಂದೆ)
- ಇಮ್ಮಡಿ ಧೋರ (ಬಂಕೇಯನ ತೃತೀಯ ಪುತ್ರ)
- ಮುಮ್ಮಡಿ ಧೋರ (ಲೋಕಾದಿತ್ಯನ ಪುತ್ರ) ಎಂಬ ಮೂವರು ಅರಸರು ಆಳ್ವಿಕೆ ಮಾಡಿದ್ದರು.
ಇವರಲ್ಲಿ ಇಮ್ಮಡಿ ಧೋರನು ಪ್ರಸ್ತುತ ಬಸದಿಯನ್ನು ನಿರ್ಮಿಸಿರುವ ಸಾಧ್ಯತೆಯಿದೆ. ಹಂಪ ನಾಗರಾಜಯ್ಯ ಅವರ ಅಭಿಪ್ರಾಯದ ಪ್ರಕಾರ, ರಾಷ್ಟ್ರಕೂಟರ ಮುಮ್ಮಡಿ ಗೋವಿಂದನ ಆಳ್ವಿಕೆಯಲ್ಲಿ, ಕೊಳನೂರಿನ (ಇಂದಿನ ನರಗುಂದ ತಾಲ್ಲೂಕಿನ ಕೊಣ್ಣೂರು) ಅಧಿಪತಿಯಾಗಿದ್ದ ೧ನೆಯ ಧೋರನು ತನ್ನ ಮನೆತನವನ್ನು ಬಂಕಾಪುರಕ್ಕೆ ಸ್ಥಳಾಂತರಿಸಿದ ಸಂದರ್ಭದಲ್ಲಿ, ಅಂದರೆ ಕ್ರಿ.ಶ. ಸುಮಾರು ೮೦೦ರಲ್ಲಿ, ಈ ಬಸದಿಯನ್ನು ನಿರ್ಮಿಸಿದ್ದಾನೆ ಎಂದು ತೋರುತ್ತದೆ.
ಈ ಬಸದಿ ೮ನೆಯ ತೀರ್ಥಂಕರ ಭಗವಾನ್ ಶ್ರೀ ಚಂದ್ರಪ್ರಭನಾಥರಿಗೆ ಅರ್ಪಿತವಾಗಿತ್ತು ಎಂದು ಅ.ಸುಂದರ ಅವರು ಅಭಿಪ್ರಾಯಪಟ್ಟಿದ್ದಾರೆ. ವೀರಸೇನಾಚಾರ್ಯರು ಕಷಾಯಪ್ರಾಭೃತ ಮತ್ತು ಚೂರ್ಣಿಸೂತ್ರಗಳ ಟೀಕಾ ಗ್ರಂಥವನ್ನು (ಜಯಧವಲಾ) ರಚಿಸಲು ಪ್ರಾರಂಭಿಸಿ, ಇಪ್ಪತ್ತು ಸಾವಿರ ಶ್ಲೋಕಗಳನ್ನು ರಚಿಸಿ ಸ್ವರ್ಗಸ್ಥರಾದರು. ಈ ಗ್ರಂಥದ ಮುಂದಿನ ಭಾಗವನ್ನು (ನಲವತ್ತು ಸಾವಿರ ಶ್ಲೋಕಗಳು) ಜಿನಸೇನಾಚಾರ್ಯರು ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಆಳ್ವಿಕೆಯಲ್ಲಿ, ವಾಟಗ್ರಾಮದ ಚಂದ್ರಪ್ರಭನಾಥರ ಬಸದಿಯಲ್ಲಿ ಪೂರ್ಣಗೊಳಿಸಿದರು.
ಈ ಚಂದ್ರಪ್ರಭನಾಥರ ಬಸದಿ ಪ್ರಸ್ತುತ ಬಂಕಾಪುರದ ಧೋರ ಬಸದಿಯೇ ಆಗಿರುವ ಸಾಧ್ಯತೆ ಇದೆ. ಆದರೆ ಈ ಬಸದಿ ಈಗ ಉಳಿದುಕೊಂಡಿಲ್ಲ.
ಶಾಸ್ತ್ರ ಆಧಾರ
ಡಾ.ಅಪ್ಪಣ್ಣ ನ ಹಂಜೆ
🕉️🌷 ಸಮವಸರಣ 🌷🕉️
SATVARTHASIDDHI
GRANTHAMALE
PRASHANT J UPADHYE
GALATAGA