ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮಿಗಳವರ 10ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ
ನರಸಿಂಹರಾಜಪುರ, ಫೆಬ್ರವರಿ 11, 2025: ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರ, ಪೆನುಗೊಂಡ ದಿಗಂಬರ ಜೈನ ಮಹಾಸಂಸ್ಥಾನ ಮಠ, ಸಿಂಹನಗದ್ದೆ ಬಸ್ತಿಮಠದಲ್ಲಿ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ 10ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಈ ಪಾವನ ಸಂದರ್ಭದಲ್ಲಿ ಜೈನ ಪರಂಪರೆಯ ಮಹತ್ವವನ್ನು ಪ್ರತಿಪಾದಿಸುವ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನಗಳು, ಪೂಜಾ ವಿಧಿಗಳು, ಮತ್ತು ಶ್ರಾವಣಬೆಳಗೊಳದ ಪ್ರಮುಖ ಜೈನ ಮುನಿ ಹಾಗೂ ಭಟ್ಟಾರಕರ ಉಪಸ್ಥಿತಿಯಲ್ಲಿ ವಿಶೇಷ ಧಾರ್ಮಿಕ ಸಂಮೇಳಗಳು ನಡೆಯಲಿವೆ.
ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಭಕ್ತಾದಿಗಳು ಈ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ. ಎಲ್ಲಾ ಜೈನ ಸಮಾಜದ ಭಕ್ತರು ಈ ಪವಿತ್ರ ದಿನದ ಸಾನ್ನಿಧ್ಯದಲ್ಲಿ ಭಾಗವಹಿಸಿ ಧಾರ್ಮಿಕ ಅನುಭವ ಪಡೆಯಲು ಹಾರ್ದಿಕ ಆಹ್ವಾನಿಸಲಾಗಿದೆ.
ವ್ಯವಸ್ಥಾಪಕರು:
ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರ, ಪೆನುಗೊಂಡ ದಿಗಂಬರ ಜೈನ ಮಹಾಸಂಸ್ಥಾನ ಮಠ, ಸಿಂಹನಗದ್ದೆ ಬಸ್ತಿಮಠ, ನರಸಿಂಹರಾಜಪುರ – 577134.
© Jain Kranti 2025 - Design & Developed by Technolink Network Chikodi


